"ಹಿಂದೂಸ್ತಾನವು ಎಂದೂ ಮರೆಯದ ಭಾರತರತ್ನವು ಜನ್ನಿಸಲಿ, ಈ ಕನ್ನಡ ಮಾತೆಯ ಮಡಿಲಲ್ಲಿ " - ಅಮೃತಘಳಿಗೆ ಚಿತ್ರದ ಈ ಹಾಡನ್ನು ನಾವೆಲ್ಲ ಕೇಳಿದ್ದೇವೆ. ಅದರಂತೆ ನಮ್ಮ ಭಾರತಮಾತೆಯ ಮಡಿಲಲ್ಲಿ ಇಂಥ ಸಾವಿರಾರು ರತ್ನಗಳು ಸಾವಿರಾರು ವರ್ಷಗಳಿಂದ ಜನಿಸುತ್ತಿದ್ದಾರೆ. ಮುಂದೆಯೂ ಜನಿಸಲಿದ್ದಾರೆ. ಇಂತಹ ರತ್ನಗಳನ್ನು ಗೌರವಿಸಲು 1954 ರಲ್ಲಿ ಕೇಂದ್ರಸರ್ಕಾರ ಭಾರತರತ್ನ ಪ್ರಶಸ್ತಿ ಸ್ಥಾಪಿಸಿತು.
ಅಮೆರಿಕಾದ "Presidential Medal of Freedom" ಮತ್ತು "Congressional Gold Medal" ಹಾಗೆ ಇಂಗ್ಲೆಂಡ್ನ "George Cross " ಮೊದಲಾದ ಅತ್ತ್ಯುತ್ತಮ ನಾಗರೀಕ ಪ್ರಶಸ್ತಿಯಂತೆ ಭಾರತರತ್ನ ಭಾರತದ ಅತಿ ದೊಡ್ಡ ನಾಗರೀಕ ಪ್ರಶಸ್ತಿ. ಇದು ಕಲೆ, ಸಾಹಿತ್ಯ,ವಿಜ್ಞಾನ ಹಾಗೂ ಸಮಾಜ ಸೇವೆ ಈ ಸಂಗತಿಗಳಲ್ಲಿ ವಿಶೇಷ ಸಾಧನೆಮಾಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ( 2011 ರಲ್ಲಿ ಇದಕ್ಕೆ ತಿದ್ದುಪಡಿ ತಂದು ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿ ಎನ್ನಲಾಗಿದೆ). ಜನವರಿ 2, 1954 ರಲ್ಲಿ ರಾಷ್ಟ್ರಪತಿಗಳ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿ ಭಾರತರತ್ನ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದು ಘೋಷಿಸಿದರು.ಅಂತೆಯೇ C. ರಾಜಗೋಪಾಲಚಾರಿ ,ಸರ್ C.V ರಾಮನ್ ಮತ್ತು ಸರ್ವೆಪಲ್ಲಿ ರಾಧಾಕೃಷ್ಣನ್ ಪ್ರಥಮ ಪುರಸ್ಕೃತರಾದರು . ಮರುವರ್ಷ 1955 ರಲ್ಲಿ ಪದ್ಮವಿಭೂಷಣವನ್ನು ಪದ್ಮವಿಭೂಷಣ, ಪದ್ಮಭೂಷಣ ಹಾಗು ಪದ್ಮಶ್ರೀ ಎಂದು ವಿಂಘಡಿಸಲಾಯಿತು .
ಪ್ರಶಸ್ತಿಯ ವಿಶೇಷತೆಗಳು:-
ಸಾಮಾನ್ಯವಾಗಿ ಜನವರಿಯಲ್ಲಿ ಪ್ರಶಸ್ತಿಗೆ ಆಯ್ಕೆಯಾದವರನ್ನು ಘೋಷಿಸಲಾಗುತ್ತದೆ, ಪ್ರಧಾನಮಂತ್ರಿಗಳು ರಾಷ್ಟ್ರಪತಿಗಳಿಗೆ ಹೆಸರನ್ನೂ ಸೂಚಿಸುತ್ತಾರೆ ರಾಷ್ಟ್ರಪತಿಗಳು ಅನುಮೋದಿಸುತ್ತಾರೆ. ನಿಯಮದಂತೆ ವರ್ಷಕ್ಕೆ 3ರಂತೆ ಪ್ರಶಸ್ತಿ ನೀಡಬಹುದಾದರೂ 1999ರಲ್ಲಿ 4 ಜನ ಆಯ್ಕೆಯಾಗಿದ್ದರು. ಪ್ರಶಸ್ತಿಯೂ ಪ್ರಮಾಣಪತ್ರ , ಪದಕ ಹಾಗು ನಗದನ್ನು ಒಳಗೊಂಡಿದೆ. ಇತ್ತೀಚಿನ ವರ್ಷದಲ್ಲಿ ನಗದು ಮೊತ್ತ 2,57,732 ರೂ ಆಗಿತ್ತು . ಪದಕವನ್ನು ಕೊಲ್ಕತ್ತಾದ ಸರ್ಕಾರೀ ಟಂಕಶಾಲೆ ಯಲ್ಲಿ ತಯಾರಿಸಲಾಗುತ್ತದೆ. ಪದಕವು ಅಶ್ವತ್ಥ ಮರದ ಎಲೆಯ ಆಕಾರದಲ್ಲಿ ಇರುತ್ತದೆ. 5.8cm ಎತ್ತರ 4.7cm ಅಗಲ ಹಾಗು 3.1mm ದಪ್ಪವಿರುತ್ತದೆ. ಪದಕದ ಒಂದು ಬದಿ ಸೂರ್ಯನ ಸಂಕೇತವಿದ್ದು ಭಾರತ ಎಂದು ಹಾಗೂ ಇನ್ನೊಂದು ಬದಿ 4 ಸಿಂಹಗಳ ಲಾಂಛನವಿದ್ದು ಸತ್ಯಮೇವ ಜಯತೇ ಎಂದು ಬರೆದಿರುತ್ತಾರೆ ಮತ್ತು ಅಕ್ಷರಗಳು ದೇವನಾಗರಿ ಲಿಪಿಯಲ್ಲಿ ಇರುತ್ತದೆ. ಪದಕವು ಬೆಳ್ಳಿಯಿಂದ ತಯಾರಾಗಿದ್ದು, ನಡುವೆ ಪ್ಲಾಟಿನಂನಿಂದ ಸಂಕೇತ ಕೊರೆಯುತ್ತಾರೆ.
ಪ್ರಶಸ್ತಿಯನ್ನು ರಾಷ್ಟ್ರಪತಿಭವನದಲ್ಲಿ ಪ್ರಧಾನಮಾಡಲಾಗುತ್ತದೆ. ರಾಷ್ಟ್ರಪತಿಗಳಿಗೆ ಸಂವಿಧಾನದಲ್ಲಿ ಮೊದಲನೇ ಸ್ಥಾನಮಾನವಿದ್ದಂತೆ ಭಾರತರತ್ನ ವಿಜೇತರಿಗೆ 7A ಸ್ಥಾನವಿರುತ್ತದೆ. ಅಂತೆಯೇ ದೇಸಿ ವಿಮಾನದಲ್ಲಿ ಉಚಿತ ಪ್ರಯಾಣ, ವಿದೇಶಿ ಪ್ರವಾಸಕ್ಕೆ ರಾಜತಾಂತ್ರಿಕ ಪಾಸ್ಪೋರ್ಟ್, V.I.P ಸ್ಥಾನಮಾನ ದೊರೆಯುತ್ತದೆ. ಇವರು ಯಾವ ರಾಜ್ಯದಲ್ಲಿ ವಾಸ್ತವ್ಯಹೂಡುತ್ತಾರೊ ಅ ರಾಜ್ಯಕ್ಕೆ ಇವರು ವಿಶೇಷ ಅತಿಥಿಯಾಗಿರುತ್ತಾರೆ.
ಇಂದಿನವರೆಗೆ 45 ಮಂದಿ ಗಣ್ಯರು ಭಾರತರತ್ನ ಪಡೆದಿರುತ್ತಾರೆ . ಇವರಲ್ಲಿ ಇಬ್ಬರು ವಿದೇಶಿಯರು ಹಾಗು 12 ಮಂದಿಗೆ ಮರಣೋತ್ತರವಾಗಿ ನೀಡಲಾಗಿದೆ. ಕ್ರಿಕೆಟ್ ಲೋಕದ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಇದನ್ನು ಪಡೆದ ಅತಿ ಕಿರಿಯರು . ಇಂಥಹ ಮೌಲ್ಯಯುತ ಪ್ರಶಸ್ತಿ ವಿವಾದಗಳಿಂದ ಮುಕ್ತವಾಗಿಲ್ಲ. ಮಹಾತ್ಮಾ ಗಾಂಧಿ, ವಿಕ್ರಮ್ ಸಾರಾಭಾಯಿ , ಹೋಮಿ ಬಾಬಾ ಮೊದಲಾದ ಸಾಧಕರಿಗೆ ಪ್ರಶಸ್ತಿ ಸಿಗದಿರುವುದು ಇನ್ನು ವಿಪರ್ಯಾಸವಾಗಿದೆ . ನೆಹರೂ ಹಾಗು ಇಂದಿರಾ ಗಾಂಧಿ ತಮಗೆ ತಾವೇ ಭಾರತರತ್ನರಾದರು. ಅಂತೆಯೇ 1976ರಲ್ಲಿ ತಮಿಳುನಾಡಿನ ರಾಜಕಾರಣಿ ಕಾಂಗ್ರೆಸ್ಸ್ ನಾಯಕ K. ಕಾಮರಾಜ್ ಗೆ ಮರಣೋತ್ತರವಾಗಿ, 1988 ರಲ್ಲಿ ಚಿತ್ರನಟ ರಾಜಕಾರಣಿ M.G.R ಗೆ ಮರಣೋತ್ತರವಾಗಿ ನೀಡಲಾಯಿತು . ತಮಿಳುನಾಡು ವಿಧಾನಸಭೆ ಚುನಾವಣೆಗೆ ಮೊದಲು ನೀಡಿದ ಈ ಎರಡು ಪ್ರಶಸ್ತಿಗಳು ರಾಜಕೀಯ ಕಲ್ಲೋಲಕ್ಕೆ ಕಾರಣವಾದವು . ಅಂಬೇಡ್ಕರ್(1990) ಹಾಗೂ ವಲ್ಲಭಬಾಯಿ ಪಟೇಲರಿಗೆ(1991) ಕೊಟ್ಟು ದೇಶ ಕಟ್ಟುವಿಕೆಯಲ್ಲಿ ಇವರು ಮಾಡಿದ ಸೇವೆಗಳನ್ನು 40 ವರ್ಷದ ನಂತರ ಅರಿತದ್ದು ಮತ್ತೊಂದು ವಿವಾದಕ್ಕೆ ದಾರಿಮಾಡಿತು.
ಭಾರತರತ್ನದ ಅತೀ ದೊಡ್ಡ ಕಪ್ಪುಮಸಿ ಎಂದರೆ ನೇತಾಜಿ ಸುಭಾಷ್ಚಂದ್ರ ಬೋಸ್ ರ ಪ್ರಕರಣ . 1992 ರಲ್ಲಿ ಪ್ರಶಸ್ತಿ ಘೋಷಿಸಿದ್ದ ತಕ್ಷಣ ಅನೇಕ ವಿವಾದಗಳು ಎದ್ದವು. ಸ್ವಾತಂತ್ರ್ಯ ಹೋರಾಟದಲ್ಲಿ ಬೋಸ್ ರ ಕೊಡುಗೆಯನ್ನು ಇಷ್ಟು ಕಾಲ ಪರಿಗಣಿಸದೆ ಇದ್ದದು ಹಾಗು ಅವರ ಮರಣ ದಿನಾಂಕ 18-08-1945 ಎಂದು ಪರಿಗಣಿಸಿದ್ದು ವಿವಾದಕ್ಕೆ ಕಾರಣವಾಯಿತು. ಅಲ್ಲಿಂದ ಇದು ಕೋರ್ಟ್ ಮೆಟ್ಟಿಲೇರಿ ಕೊನೆಗೆ 1997 ರವರೆಗೆ ಪ್ರಶಸ್ತಿ ರದ್ದು ಮಾಡಲಾಯಿತು. ಹಾಗೆ ಬೋಸರು ಭಾರತರತ್ನದಿಂದ ವಂಚಿತರಾದರು. ಬಹುಶಃ ಅವರು ಭಾರತ ರತ್ನಕ್ಕಿಂತಲೂ ಮಿಗಿಲಾದ ವ್ಯಕ್ತಿತ್ವ ಹೊಂದಿದರು . ಮುಂದೆ 2013ರಲ್ಲಿ ದ್ಯಾನ್ಚಂದ್ ರನ್ನು ಕಡೆಗಣಿಸಿ ಸಚಿನ್ಗೆ ನೀಡಿದ್ದು ಸಣ್ಣ ಅಸಮಾಧಾನಕ್ಕೆ ಕಾರಣವಾಯಿತು.
ಭಾರತರತ್ನದ ಅತೀ ದೊಡ್ಡ ಕಪ್ಪುಮಸಿ ಎಂದರೆ ನೇತಾಜಿ ಸುಭಾಷ್ಚಂದ್ರ ಬೋಸ್ ರ ಪ್ರಕರಣ . 1992 ರಲ್ಲಿ ಪ್ರಶಸ್ತಿ ಘೋಷಿಸಿದ್ದ ತಕ್ಷಣ ಅನೇಕ ವಿವಾದಗಳು ಎದ್ದವು. ಸ್ವಾತಂತ್ರ್ಯ ಹೋರಾಟದಲ್ಲಿ ಬೋಸ್ ರ ಕೊಡುಗೆಯನ್ನು ಇಷ್ಟು ಕಾಲ ಪರಿಗಣಿಸದೆ ಇದ್ದದು ಹಾಗು ಅವರ ಮರಣ ದಿನಾಂಕ 18-08-1945 ಎಂದು ಪರಿಗಣಿಸಿದ್ದು ವಿವಾದಕ್ಕೆ ಕಾರಣವಾಯಿತು. ಅಲ್ಲಿಂದ ಇದು ಕೋರ್ಟ್ ಮೆಟ್ಟಿಲೇರಿ ಕೊನೆಗೆ 1997 ರವರೆಗೆ ಪ್ರಶಸ್ತಿ ರದ್ದು ಮಾಡಲಾಯಿತು. ಹಾಗೆ ಬೋಸರು ಭಾರತರತ್ನದಿಂದ ವಂಚಿತರಾದರು. ಬಹುಶಃ ಅವರು ಭಾರತ ರತ್ನಕ್ಕಿಂತಲೂ ಮಿಗಿಲಾದ ವ್ಯಕ್ತಿತ್ವ ಹೊಂದಿದರು . ಮುಂದೆ 2013ರಲ್ಲಿ ದ್ಯಾನ್ಚಂದ್ ರನ್ನು ಕಡೆಗಣಿಸಿ ಸಚಿನ್ಗೆ ನೀಡಿದ್ದು ಸಣ್ಣ ಅಸಮಾಧಾನಕ್ಕೆ ಕಾರಣವಾಯಿತು.
-Tharantha Sona