Saturday, January 28, 2017

Kirik party | Kaagadada dhoniyalli





ಚಿತ್ರ :- ಕಿರಿಕ್ ಪಾರ್ಟಿ

ಸಂಗೀತ :- ಬಿ. ಅಜನೀಶ್ ಲೋಕನಾಥ್

ಗಾಯಕ :-ವಾಸುಕಿ ವೈಭವ್

ಸಾಹಿತ್ಯ :- ಜಯಂತ್ ಕಾಯ್ಕಿಣಿ


________________________________

ಕಾಗದದ ದೋಣಿಯಲ್ಲಿ

ನಾ ಕೂರುವಂತ ಹೊತ್ತಾಯಿತೇ?

ಕಾಣಿಸದ ಹನಿಯೊಂದು

ಕಣ್ಣಲ್ಲೆ ಕೂತು ಮುತ್ತಾಯಿತೇ?

ಹಗುರಾಗಿತೇನೊ ನನ್ನೆದೆಯ ಭಾರ

ಕಂಡಿತೇನೊ ತಂಪಾದ ತೀರ

ಸಿಕ್ಕಿತೇ ಮುಂದಿನ ದಾರಿ

ನನ್ನೆಲ್ಲಾ ಕಲ್ಪನೆ ಮೀರಿ

ಇನ್ನೊಂದೆ ವಿಸ್ಮಯ ತೋರಿ…........



ಹಾದಿಯಲ್ಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ

ಅಡದಿರೊ ಸಾವಿರ ಪದಗಳ ಮೂಕ ಸೇತುವೆ ಕಣ್ ಮುಂದಿದೆ

ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೊ ಮಳೆಗಾಲವೇ

ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ

ಮಗುವಾಗುವೆ

ಮನಸಾಗಿತೇನೊ ಇನ್ನು ಉದಾರ

ಬಂದೀತೇನೊ ನನ್ನ ಬಿಡಾರ

ಸಿಕ್ಕಿತೇ ಮುಂದಿನ ದಾರಿ

ನನ್ನೆಲ್ಲಾ ಕಲ್ಪನೆ ಮೀರಿ

ಇನ್ನೊಂದೆ ವಿಸ್ಮಯ ತೋರಿ…..........




Monday, January 23, 2017

ಏನು ಏನು ನೀ ನನಗೆ?

 
 



ಯಾಕೆ ಬಂದೆ ನೀ ನನ್ನೊಳಗೆ
ಅಳಿಸಲಾಗದು ನಿನ್ನ ಹೆಜ್ಜೆ
ಮೂಡಿ ನನ್ನ ನೆನಪೊಳಗೆ
ಕೇಳಿಸದೇನು ನನ್ನ ಮಾತು
ಬಂಧಿ ನಾನು ನಿನ್ನೊಳಗೆ
ಏನು ಏನು ನೀ ನನಗೆ?
ಪರಿಚಿತೆಯಲ್ಲ ! ಸ್ನೇಹಿತೆಯಲ್ಲ!
ನಿನಗೆ ನನ್ನಲ್ಲಿ ಹೆಸರಿಲ್ಲ.
ನೀನು ಇರದ ನಾನೆನಲ್ಲ
ಇದರ ಹೊರತು ಇನ್ನೇನಿಲ್ಲ
ಹೇಳಿ ಬಿಡು ಓ ಮೌನವೇ! ಒಮ್ಮೆ
ಏನು ಏನು ನೀ ನನಗೆ?
ಓಡುವೆ ದೂರ ನಿನ್ನನು ಬಿಟ್ಟು
ನಟಿಸಿ ನಿನ್ನನೇ ಮರೆತಂತೆ
ನೋಡುವೆ ನಿನ್ನನೇ ಗಮನವಿಟ್ಟು
ದಿಟ್ಟಿಸಿ ಕಣ್ಣನೇ ಮರೆತಂತೆ
ಹೇಳಿ ಬಿಡು ಓ ಮೌನವೇ ಒಮ್ಮೆ
ಏನು ಏನು ನೀ ನನಗೆ?
ಓದುವೆ ನಿನ್ನ ಸಂದೇಶವನ್ನು
ಅರ್ಥವಾಗದ ಕಾವ್ಯದಂತೆ
ಓದಲಿ ಹೇಗೆ ನಿನ್ನ ಮನವನ್ನು
ಇದ್ದರೆ ಹಣೆಯ ಬರಹದಂತೆ
ಹೇಳಿ ಬಿಡು ಓ ಮೌನವೇ ಒಮ್ಮೆ
ಏನು ಏನು ನೀ ನನಗೆ?
ಕೂರುವೆ ನಾನು ನಿದ್ದೆಯ ಕೆಟ್ಟು
ಕಾಲವ ಕೂಡ ಮರೆತಂತೆ
ನಿನ್ನಲೇನಿದೆ? ಅಂಥಹ ಗುಟ್ಟು
ನನ್ನ ಮನವ ಸೆಳೆವಂತೆ
ಹೇಳಿ ಬಿಡು ಓ ಮೌನವೇ ಒಮ್ಮೆ
ಏನು ಏನು ನೀ ನನಗೆ?
-Tharanatha sona