Saturday, March 21, 2015

ಕವನ

ಮನದ ಮಿಡಿತವ ತುಡಿತವ
ಅರಿಯದೆ ಹೋದ ನೀನ್ಯಾವಳೇ?
ಹೃದಯದ ಬಡಿತ ಮನಸ್ಸಿನ ನುಲಿತ
ತಿಳಿಯದೇ ಹೋದ ನನ್ನವಳೇ!
ಕಲರವ ಕಪ್ಪೆಗೂ ಮುಂಗಾರು ಮಳೆಗೂ
ಯಾವ ಜನ್ಮದ ಮೈತ್ರಿಯಿದೆ?
ನಿನ್ನ ಬರುವಿಗೆ ನನ್ನಲ್ಲಿರುವ
ಜಾತಕ ಹಕ್ಕಿಯೂ ಕಾಯುತ್ತಿದೆ
ಬೆಟ್ಟದ ನೆಲ್ಲಿಗೂ ಕಡಲಿನ ಉಪ್ಪಿಗೂ ಊಹಿಸಲಾರದ ಸ್ನೇಹವಿದೆ
ಬೆಟ್ಟದ ನದಿಯೂ ಕಡಲನು ಸೇರಿ
ಬಂಧವೊಂದನ್ನು ಸಾಧಿಸಿದೆ
ಮನಸ್ಸು ಮನಸ್ಸಿಗೂ ಸೇತುವೆ ಬೇಕು
ಭಾವನೆ ಅದನ್ನು ಸಾಧಿಸದೆ?
ಭಾವನೆ ಕಟ್ಟಿದ ಸೇತುವೆ ಮೇಲೆ
ನಡೆಯಲು ನಿನಗೆ ಮನಬಾರದೆ?