Tuesday, April 26, 2016

ಉಕ್ಕಿನ ಮಹಿಳೆ - ಗೋಲ್ಡಾ ಮಿರ್ 

                                        " ನಾನು ಸಮಯವನ್ನು ಆಳುತ್ತೇನೆ ಹೊರತು ಸಮಯ ನನ್ನನಲ್ಲ. "

         ಇಸ್ರೇಲ್ ಎಂದರೆ ತಕ್ಷಣ ನೆನಪಾಗುವುದು ಯುದ್ದ-ಹೋರಾಟ ಅಥವಾ ಅದರ ರಾಷ್ಟ್ರಭಕ್ತಿ.  2000 ವರ್ಷಗಳಿಂದ ತಾಯಿನೆಲೆ ಬಿಟ್ಟು ಅಲೆಮಾರಿಯಾದ ಯಹೂದಿ ಜನಾಂಗ ಇಂದು ನೆಲೆಸಿರುವ ನಾಡು. 20 ಶತಮಾನಗಳು ಅವರಿವರಿಂದ ತುಳಿತಕ್ಕೆ ಒಳಗಾಗಿ ವಿಶ್ವದಾದ್ಯಂತ ಹಂಚಿ ಹೋದ ಜನಾಂಗ ಮತ್ತೆ ಒಂದುಗೂಡಿದ ದೇಶ. ಜರ್ಮನಿ ಸರ್ವಾಧಿಕಾರಿ ಹಿಟ್ಲರನ ವಿಷಾನೀಲಕ್ಕೆ ತಮ್ಮವರನ್ನು ಕಳೆದುಕೊಂಡ ನೋವಲ್ಲಿ ಮತ್ತೆ ದೇಶಕಟ್ಟಿದ ಛಲಗಾರರ ದೇಶ. ಸಿಕ್ಕ ಸ್ವಾತಂತ್ಯವನ್ನು ಉಳಿಸಿಕೊಳ್ಳಲು, ಸುತ್ತ ನೆರೆದಿರುವ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸದಾ ಎಚ್ಚರಿಕೆಯಿಂದ ಇರುವ ದೇಶ. ಮರುಭೂಮಿಯಲ್ಲಿ ಹಸಿರು ಬೆಳೆದ ಮಾಯಗಾರರ ನಾಡು. ಇಂಥಹ ನಾಡಿನ ಧೀರ ಮಹಿಳೆಯೇ ಗೋಲ್ಡಾ ಮಿರ್. 

         ಗೋಲ್ಡಾ ಮಿರ್ ಇಂದಿನ ಉಕ್ರೇನ್ ದೇಶದಲ್ಲಿರುವ ಕೀವ್ ಪಟ್ಟಣದಲ್ಲಿ ಮೇ 3, 1898ರಲ್ಲಿ ಜನಿಸಿದರು. ತಂದೆ ಮೋಶೆ ಮಬೋವಿಚ್ಚ್ ಒಬ್ಬ ಬಡಗಿ. ಅವರು ನಂತರ ಉದ್ಯೋಗ ಹುಡುಕಿ ಅಮೆರಿಕಕ್ಕೆ ಹೊರಟರು.ಅಮೇರಿಕಾದಲ್ಲಿ ಓದು ಮುಗಿಸಿದ ಗೋಲ್ಡಾ ಕೆಲಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. 1917ರಲ್ಲಿ ಮಾರಿಸ್ ಮೆಯೇರ್ಸೋನ್ ಎನ್ನುವರನ್ನು ಮದುವೆಯಾದರು. 1921ರಲ್ಲಿ ಪ್ಯಾಲೆಸ್ಟೈನ್ನಲ್ಲಿ ನೆಲೆಯಾದರು. ಅಲ್ಲಿ ಕೃಷಿ ಮಾಡಿ ನೆಲೆಸುವುದು ಅವರ ಇಚ್ಛೆಯಾಗಿತ್ತು ಅವರಿಗೆ 2 ಜನ ಮಕ್ಕಳು ಜನಿಸಿದವು. ಇಲ್ಲಿಗೆ ಗೋಲ್ಡಾಳ ಬದುಕಿನ ಒಂದು ಘಟ್ಟ ಮುಗಿದಿತ್ತು. ಮತ್ತೆ ಅಮೆರಿಕಕೆ ಹೋದ ಗೋಲ್ಡಾ ತಮ್ಮ ಬದುಕನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು. ಮೊದಲಿಗೆ ಪ್ಯಾಲೆಸ್ಟೈನ್ ನಲ್ಲಿ ಯಹೂದಿಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು.

          ಬದಲಾದ ಸನ್ನಿವೇಶದಲ್ಲಿ ಹಿಟ್ಲರನ ಕಿರುಕುಳಕ್ಕೆ ನಲುಗಿದ ಯಹುದಿಗಳಿಗೆ ಅಮೇರಿಕಾ ದೇಶ ಕಟ್ಟುವ ಭರವಸೆ ನೀಡಿತು. 1946ರಲ್ಲಿ ಗೋಲ್ಡಾ ಯಹೂದಿ ಹೋರಾಟ ವೇದಿಕೆಯ ರಾಜಕೀಯ ವಿಭಾಗದ ಮುಖ್ಯಸ್ಥರಾದರು. ದೇಶ ರಚಿಸುವ ಮಾತುಕತೆಗೆ ಹೋರಾಟಗಾರರು ಹಾಗು ಬ್ರಿಟನ್ ನಡುವಿನ ಕೊಂಡಿಯಾದರು. ಜೂನ್ 1948ರ ಹೊತ್ತಿಗೆ ಹೊಸ ದೇಶ ಇಸ್ರೇಲ್ ರಚನೆಗೆ ನೀಲನಕ್ಷೆ ಸಿದ್ದವಾದವು. ಸುತ್ತಮುತ್ತ ಶತ್ರುಗಳನ್ನು ಹೊಂದಿರುವ ಕಾರಣ ರಕ್ಷಣಾ ಉಪಕರಣಗಳ ಖರೀದಿಗೆ ಅಗತ್ಯವಾಗಿ 8 ಮಿಲಿಯಾನ್ ಡಾಲರ್ ಬೇಕಾಗಿತ್ತು. ಇದಕ್ಕಾಗಿ ಇಸ್ರೇಲ್ ನಾಯಕ ಬೆನ್ ಗುರಿಯನ್ ಅಮೆರಿಕಾಕೆ ಹೋಗಲು ಯೋಚಿಸಿದರು. ಯುದ್ದ ನಡೆಯುವ ಸಂದರ್ಭ ಇರುವುದರಿಂದ ಅವರು ದೇಶ ಬಿಟ್ಟು ಹೋಗುವುದು ತರವಲ್ಲ ಎಂದು ಯೋಚಿಸಿದ ಗೋಲ್ಡಾ ತಾವು ಹೋದರು. ಅಮೇರಿಕಾದಲ್ಲಿ ನೆಲೆಸಿರುವ ಯಾಹುದಿಗಳಿಂದ  ಧನ ಸಂಗ್ರಹಿಸಲು ನಿರ್ಧರಿಸಿದರು. ಅಲ್ಲಿ ತಾಯಿನೆಲಕ್ಕೆ ಒದಗಿದ ದುಸ್ಥಿತಿಯನ್ನು ಮನ ಮಿಡಿಯುವಂತೆ ವಿವರಿಸಿ 50 ಮಿಲಿಯನ್ ಡಾಲರ್ ಸಂಗ್ರಹಿಸಿ ನಾಡಿಗೆ ಮರಳಿದಾಗ ಅವರಿಗೆ ಭವ್ಯ ಸ್ವಾಗತ ಸಿಕ್ಕಿತ್ತು. ಸ್ವತಹ ಬೆನ್ ಗುರಿಯನ್ ಅವರೇ "ಇಸ್ರೇಲ್ ಎನ್ನುವ ದೇಶವನ್ನು ಸಾಧ್ಯವಾಗಿಸಿದ ಮಹಿಳೆ" ಎಂದು ಘೋಷಿಸಿದರು. ಮೇ 14 1948 ರಲ್ಲಿ ಇಸ್ರೇಲ್ ಸ್ವಾತಂತ್ರ ಘೋಷಣೆಗೆ ಸಹಿ ಹಾಕಿದ 24 ಮಂದಿಯಲ್ಲಿ ಗೋಲ್ಡಾ ಒಬ್ಬರಾಗಿದ್ದರು. ಮರುದಿನವೇ ಅರಬ್ ದೇಶಗಳು ಇಸ್ರೇಲ್ ನತ್ತ ದಾಳಿಯಿಕ್ಕಿದವು. ಇಸ್ರೆಲಿಗರು  ಸಾಹಸದಿಂದ ಅರಬ್ಬರನ್ನು ಸೋಲಿಸಿ 2000 ವರ್ಷಗಳಿಂದ ಕಳೆದುಹೋಗಿದ್ದ ತಾಯಿನೆಲವನ್ನು ಮತ್ತೆ ಪಡೆದರು.

           ಗೋಲ್ಡಾ ಕೆಲಕಾಲ ರಶಿಯಾದಲ್ಲಿ ಇಸ್ರೇಲ್ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. 1949 ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಕಾರ್ಮಿಕ ಮಂತ್ರಿಯಾದರು ಮತ್ತು ಹೊಸದೇಶ ಕಟ್ಟಲು ಶ್ರಮವಹಿಸಿದರು. 1956 ರಲ್ಲಿ ವಿದೇಶಾಂಗ ಮಂತ್ರಿಯಾಗಿ ಆಯ್ಕೆಯಾಗಿ ಇಸ್ರೇಲ್ಗೆ ವಿಶ್ವ ಮಾನ್ಯತೆ ಸಿಗಲು ಕಾರಣರಾದರು. 1966 ರವರೆಗೆ ಇದೇ  ಹುದ್ದೆಯಲ್ಲಿ ಮುಂದುವರೆದ ಗೊಲ್ದಾರಿಗೆ ದೊಡ್ಡ ಹೊಣೆಗಾರಿಕೆಯೊಂದು ಸಿಕ್ಕಿತ್ತು. 1969 ರ ಫೆಬ್ರವರಿ 26 ರಂದು ಪ್ರಧಾನಿ ಲೆವಿ ಇಷ್ಕೊಲ್ ನಿಧನದ ನಂತರ 17 ಮಾರ್ಚ್ 1969 ರಂದು ಇಸ್ರೇಲ್ನ ನಾಲ್ಕನೆ ಪ್ರಧಾನಿಯಾಗಿ  ಅಯ್ಕೆಯಾದರು. ಇವರ ನಾಯಕತ್ವ ಗುಣ ವಿಶ್ವಕ್ಕೆ ಪರಿಚಯವಾದದು 1972 ರಲ್ಲಿ. ಅಂದು ಸೆಪ್ಟೆಂಬರ್ 4 ಜರ್ಮನಿಯ ಮ್ಯುನಿಚ್ ಬೇಸಿಗೆ ಓಲಂಪಿಕ್ ಕ್ರೀಡಾಂಗಣ. ಬ್ಲಾಕ್ ಸೆಪ್ಟೆಂಬರ್  ಎಂಬ ಪ್ಯಾಲೆಸ್ಟೈನ್ ಹೋರಾಟಗಾರರು ಇಸ್ರೇಲ್ನ 11 ಜನ ಕ್ರೀಡಾಳುಗಳನ್ನೂ ಒತ್ತೆಯಾಳುಗಳನ್ನಾಗಿ ಇಟ್ಟುಕ್ಕೊಂಡರು. ಜರ್ಮನಿ ಪೋಲಿಸ್ ಕಾರ್ಯಾಚರಣೆಗೆ ಒತ್ತೆಯಾಳುಗಳು , ಉಗ್ರರು ಬಲಿಯದರು. ತಮ್ಮ ದೇಶಕ್ಕೆ ಒದಗಿದ ಅಪಮಾನಕ್ಕೆ ಕ್ಶುದ್ರರಾದ ಪ್ರಧಾನಿ ಈ ಧಾಳಿ ಹಿಂದೆ ಇರುವ ತಲೆಗಳನ್ನು ರಹಸ್ಯವಾಗಿ ಉರುಳಿಸಲು ಅದೇಶಿಸಿದರು. ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ವಿಶ್ವದಾದ್ಯಂತ ಹರಡಿರುವ ಈ ಧಾಳಿಯ ಸೂತ್ರದಾರರನ್ನು ಕೊಲ್ಲಳು ಆರಂಭಿಸಿತು. ಆಪರೇಷನ್ ವ್ರತ್ ಆಫ್ ಗಾಡ್ ಎನ್ನುವ ಕಾರ್ಯಾಚರಣೆ 1988 ರವರೆಗೆ ನಡೆಯಿತು. 1979 ರಲ್ಲಿ ಧಾಳಿಯ ಸೂತ್ರಧಾರ ಅಲಿ ಹಸನ್ ಸಲಿಂ ಹತನಾದ. ಹೊರಜಗತ್ತಿಗೆ ತಿಳಿಯದಂತೆ ಇಂಥ ಕೆಲಸಕ್ಕೆ ಕೈ ಹಾಕಿದ್ದು ಗೋಲ್ಡಾ ಅವರ ಎದೆಗಾರಿಕೆಯೇ ಸರಿ.

1973 ಅಕ್ಟೋಬರ್ ತಿಂಗಳು ಇಸ್ರೇಲ್ ಪಾಲಿಗೆ ಕಷ್ಟದ ದಿನಗಳು. ಸಿನಾಯ್ ಕಡೆಯಿಂದ ಈಜ್ಯಿಪ್ಟ್ ಹಾಗು ಗೋಲ್ಡನ್ ಹೈಟ್ ಕಡೆಯಿಂದ ಸಿರಿಯಾ ಜಂಟಿ ಧಾಳಿಯಿಕ್ಕಿದವು. 1966 ರ 6 ದಿನಗಳ ಯುದ್ದದಲ್ಲಿ ಇಸ್ರೇಲ್ ಗಳಿಸಿದ್ದ ಪ್ರದೇಶಗಳಿವು . "ಈಜ್ಯಿಪ್ತ್ತಿಯನ್ನರು ಈಜ್ಯ್ಪಿಪ್ತ್ತಿನವರೆಗೆ ಹಿಂದೆ ಓಡಬಹುದು. ಸಿರಿಯನ್ನರು ಸಿರಿಯಾ ತನಕ ಹೋಗಬಹುದು, ನಮಗೆ ಕೇವಲ ಸಮುದ್ರ ಉಳಿದಿದೆ. ಸೋಲುವ ಮೊದಲು ಹೊರಡುವ" ಎನ್ನುತ್ತಾ  ಮುನ್ಸೂಚನೆ ಇಲ್ಲದೆ ಎರಗಿದ ಶತ್ರುವಿನಿಂದ ದೇಶವನ್ನು ಮುನ್ನಡೆಸಿದ್ದು ಅಲ್ಲದೆ ಸೂಯೆಜ್ ಕಾಲುವೆಯವರೆಗೆ ಸೈನ್ಯ ನುಗ್ಗಿಸಿ ಗೆಲುವು ಸಾಧಿಸಿದರು. ಯೊಂ-ಕಿಪ್ಪೂರ್ ವಾರ್ ಎನ್ನುವ ಈ ಯುದ್ದದಲ್ಲಿ ಅಕ್ಟೋಬರ್ 5 ರಿಂದ 25 ರವರೆಗೆ ಅರಬ್ಬಿಗಳಿಗೆ ಮರೆಯಲಾಗದ ಹೊಡೆತ ನೀಡಿದರು. ಮುಂದೆ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದು 1974 ರ ಏಪ್ರಿಲ್ 11 ರಂದು ಗೋಲ್ಡಾ ಮಿರ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇವರು ಪ್ರಧಾನಿ ಇಂದಿರಾ ಗಾಂಧಿ ಸಮಕಾಲೀನರಾಗಿ ಭಾರತ-ಪಾಕ್ ನ 1971ರ ಯುದ್ದದಲ್ಲಿ ಭಾರತಕ್ಕೆ ಯುದ್ದೋಪಕರಣ ನೀಡಿ ಸಹಕರಿಸಿದರು.

ಇಸ್ರೇಲ್ ದೇಶದ ತಾಯಿಯಾಗಿದ್ದ ಗೋಲ್ಡಾ 1978 ರ ಡಿಸೆಂಬರ್ 8 ರಂದು ನಿಧನರದರು. ಅವರ ಭೌತಿಕ ಶರೀರದ ಅಂತ್ಯಸಂಸ್ಕಾರ ಡಿಸೆಂಬರ್ 12 ರಂದು ನಡೆಯಿತು. ಇಸ್ರೇಲ್ನ ಉಕ್ಕಿನ ಮಹಿಳೆ (IRON LADY) ಇಂದು ಇಲ್ಲವಾದರೂ ಅವರ ಕೆಚ್ಚು, ಧೈರ್ಯ ಇಂದಿಗೂ ಇಸ್ರೇಲ್ಗಿದೆ .ಬಗಲಲ್ಲಿರುವ ಹತ್ತಾರು ಶತ್ರುಗಳು ಇಂದಿಗೂ ಗೆಲ್ಲಲಾಗದ ಇಸ್ರೇಲ್ ಮಣ್ಣೇ ಇದಕ್ಕೆ ಸಾಕ್ಷಿ.

                                                                               
                                                                                            -Tharanatha sona





Sunday, April 24, 2016

ಕಾಂಗ್ರೆಸ್ ಮುಕ್ತ ಸುಳ್ಯದಲ್ಲಿ ಅರಳಿದ ಕಮಲ

                                 








                     ಸುಳ್ಯ- ಇಂದು ಇದು ರಾಜಕೀಯವಾಗಿ ದಕ್ಷಿಣಕನ್ನಡಕ್ಕೆ ಸೇರಿದರೂ, ಇನ್ನೂ ಕೊಡಗಿನ ಕೆಲವು ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಪ್ರದೇಶ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಹೊಂದಿರುವ ತಾಲೂಕು. ಅತ್ತ ಮಂಗಳೂರಿನಂತೆ ಸಮತಟ್ಟಾಗಿರದೆ , ಕೊಡಗಿನಂತೆ ಸಣ್ಣ ಬೆಟ್ಟ-ಗುಡ್ಡ ವನ್ನು ಹೊಂದಿರೋ ಪ್ರದೇಶ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಸಿರು ಸಿರಿಯಲ್ಲಿ  ಮಲಗಿರುವ ಊರು. ಇಲ್ಲಿನ ಜನ ಸ್ವಾಭಿಮಾನಿಗಳು , 1837 ರಲ್ಲಿ ನಡೆದ ಅಮರ ಸುಳ್ಯದ ರೈತ ದಂಗೆ ಇದಕ್ಕೆ ಸಾಕ್ಷಿ. ಅಂದು ತಮ್ಮನಾಳುತ್ತಿದ್ದ ಬ್ರಿಟಿಷರ ವಿರುದ್ದ ಕಂದಾಯ ಪಾವತಿ , ಕೊಡಗಿನ ಅರಸ ಚಿಕ್ಕವೀರರಾಜೇಂದ್ರನ ಪದಚ್ಯುತಿ ಕಾರಣಕ್ಕಾಗಿ ದಂಗೆ ಎದ್ದ ರೈತರು ಮಂಗಳೂರಿಗೆ ಮುತ್ತಿಗೆ ಹಾಕಿದ್ದರು. ಮೊದಲು ಮಂಗಳೂರನ್ನು ಗೆದ್ದರೂ ನಂತರ ಆಂಗ್ಲರಿಗೆ ಬಿಟ್ಟು ಕೊಡಬೇಕಾಯಿತು.


                  ಸುಳ್ಯದ ಜನ ಪ್ರಜ್ಞಾವಂತರು , ದೇಶದ ಪ್ರತಿ ವಿದ್ಯಮಾನವನ್ನು ಸೂಕ್ಷ್ಮ ಕಣ್ಣಿನಿಂದಲೇ ಗಮನಿಸಿ ತಕ್ಕನಾಗಿ ಪ್ರತಿಸ್ಪಂದಿಸುತ್ತಾರೆ. ೫೦ ವರ್ಷದ ಹಿಂದೆ ಮಲೇರಿಯಾ ಮೊದಲಾದ ರೋಗಗಳಿಂದ , ಬಡತನದಿಂದ ಬಳಲುತ್ತಿದ್ದ ಊರು ಈಗ ಬದಲಾಗಿದೆ .  ಬಹುತೇಕ ಗ್ರಾಮೀಣ ಪ್ರದೇಶವನ್ನು ಹೊಂದಿದ್ದರೂ ಕೂಡ 86.35% ರಷ್ಟು ಸಾಕ್ಷರತೆಯನ್ನು ಹೊಂದಿದೆ. ಅಧುನಿಕ ಸುಳ್ಯದ ನಿರ್ಮಾತೃ ದಿ. ಕುರುಂಜಿ ವೆಂಕಟರಮಣ ಗೌಡರು ಕಟ್ಟಿ ಬೆಳೆಸಿದ ಕೆ.ವಿ.ಜಿ ಕ್ಯಾಂಪಸ್ನಲ್ಲಿ ಎಲ್ಲ ತೆರನಾದ ಶಿಕ್ಷಣದ ವ್ಯವಸ್ಥೆ ಇದೆ. ಇಂಜಿನಿಯರಿಂಗ್ , ಮೆಡಿಕಲ್ , ಆಯುರ್ವೇದ, ದಂತ ವೈದ್ಯಕೀಯ ಕಾಲೇಜ್ ಇದೆ. ೩೦೦೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  ಕೆಲವರಲ್ಲಿ ಇನ್ನು ಒಂದು ಭಾವನೆಯಿದೆ ,ಏನೆಂದರೆ ಬುದ್ದಿವಂತರು ಅಥವಾ ಬುದ್ದಿಜೀವಿಗಳ(?) ಪಕ್ಷ ಕಾಂಗ್ರೆಸ್ ಎಂದು. ಅದರೆ ಇಷ್ಟೆಲ್ಲಾ ಶೈಕ್ಷಣಿಕವಾಗಿ ಮುಂದಿರುವ ಊರಲ್ಲಿ ಇಂದು ಕಮಲ ಅರಳಿದೆ ಎಂದರೆ ಅದಕ್ಕೆ ಸುಳ್ಯದ ನಾಗರಿಕರ ಅಜ್ಞಾನ ಕಾರಣವಲ್ಲ ಬದಲಾಗಿ , ದೇಶದ ಮೇಲಿರುವ ಅಭಿಮಾನ ಅವರನ್ನು ಬಿ.ಜೆ.ಪಿ ಯತ್ತ ವಾಲುವಂತೆ ಮಾಡಿದೆ. ಅದಕ್ಕೆ ಇಷ್ಟೆಲ್ಲಾ ಹೇಳಬೇಕಾಗಿ ಬಂತು.


                   ಮೊನ್ನೆ ನಡೆದ ಜಿ. ಪಂ , ತಾ. ಪಂ ಚುನಾವಣೆಗಳಲ್ಲಿ ಬಿ.ಜೆ.ಪಿ ಮತ್ತೆ ಜಯಭೇರಿ ಭಾರಿಸಿತು. ಜಿ.ಪಂ ನ 4 ಕ್ಷೇತ್ರದಲ್ಲಿ 4 ಹಾಗು ತಾ.ಪಂನ 13 ಕ್ಷೇತ್ರದಲ್ಲಿ 9 ರಲ್ಲಿ ಜಯಶಾಲಿ ಆಯಿತು. ಅಲ್ಲದೆ 28 ಗ್ರಾಂ.ಪ ನಲ್ಲಿ  23 ನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಲ್ಲದೆ ಸುಳ್ಯ ಪಟ್ಟಣ ಪಂಚಾಯತ್ ಹಾಗು ಬಹುತೇಕ ಸಹಕಾರಿ ಬ್ಯಾಂಕ್ ಹೀಗೆ ಸಂಪೂರ್ಣ ಕಮಲಮಯವಾಗಿದೆ . ಮೀಸಲು ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಸತತ 5 ಭಾರಿ ಶಾಸಕ ಎಸ್. ಅಂಗಾರರು ಪ್ರತಿನಿಧಿಸುತ್ತಿದ್ದಾರೆ. 1983 ರಲ್ಲಿ ಬಾಕಿಲ ಹುಕ್ರಪ್ಪರು ಮೊದಲ ಭಾರಿಗೆ ಬಿ.ಜೆ.ಪಿ ಯಿಂದ ಆಯ್ಕೆಯಾದರು. ನಂತರ ಮತ್ತೆ ಕಾಂಗ್ರೇಸ್ ವಶವಾದ ಕ್ಷೇತ್ರವನ್ನು 1994 ರಲ್ಲಿ ಗೆದ್ದ ಅಂಗಾರರು ನಂತರ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ.


             2013 ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅದಿಕಾರಕ್ಕೆ ಬಂದಿತ್ತು. ಸ್ವಜನ ಪಕ್ಷಪಾತ,   ಭ್ರಷ್ಟಚಾರ , ಹಗರಣಗಲಿಂದಾಗಿ ಕರಾವಳಿ ಕರ್ನಾಟಕದಲ್ಲಿ ಬಿ.ಜೆ.ಪಿ ಮಕಾಡೆ ಮಲಗಿತ್ತು. ದಕ್ಷಿಣ ಕನ್ನಡದ ವಿಧಾನಸಭಾ 8 ಕ್ಷೇತ್ರದಲ್ಲಿ 7 ಕಾಂಗ್ರೆಸ್ ಪಾಲಾಗಿತ್ತು. ಆದರೆ ಸುಳ್ಯ ವಿಧಾನಸಭಾ ಕ್ಷೇತ್ರ  'ಕೈ'ಗೆಟಕಲೇ ಇಲ್ಲ. 1000ಕ್ಕೂ ಹೆಚ್ಚು ಮತಗಳಿಂದ ಸುಳ್ಯದಲ್ಲಿ ಗೆದ್ದ ಬಿ.ಜೆ.ಪಿ ಕ್ಲೀನ್ ಸ್ವೀಪ್ ಮಾಡುವ ಕಾಂಗ್ರೆಸ್ ಆಸೆಗೆ ತಣ್ಣಿರೇರಚಿತು. ಅಂಗಾರರ ಸರಳ ಸ್ವಭಾವ, ಭ್ರಷ್ಟಾಚಾರ ಮುಕ್ತ ಬದುಕು ಅವರನ್ನು 22 ವರ್ಷಗಳಿಂದ ಶಾಸಕರನ್ನಾಗಿ ಮಾಡಿದೆ. ಅಂತೆಯೇ ರಾಜ್ಯದ ಮಾಜಿ ಮುಖ್ಯಮಂತ್ರಿ , ಹಾಲಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡರ ಹುಟ್ಟಿದ ಊರು. ಹಾಗೇ ಮಾಜಿ ಇಂಧನ ಸಚಿವೆ , ಉಡುಪಿ- ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ಯವರ ತವರೂರು ಸುಳ್ಯ. ಅಗೊಮ್ಮೆ-ಈಗೊಮ್ಮೆ  ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟರು ಸಹ ಬಿ.ಜೆ.ಪಿ ಕೈ ಬಿಟ್ಟಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ರಿಗೆ 25,000 ಮತಗಳ ಮುನ್ನಡೆ ದೊರಕಿಸಿಕೊಟ್ಟ ಸುಳ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಬಿಸಿತುಪ್ಪವಾಗಿದೆ. ಸುಳ್ಯದ ಈ ವಿಜಯಗಳಿಗೆ ಬಿ.ಜೆ.ಪಿ  ಮಾತೃಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ಬಹಳವಿದೆ . ಸಂಘದ ಶಾಖೆಗಳ ಮೂಲಕ ಇಂದಿಗೂ ಯುವಜನರಲ್ಲಿ ರಾಷ್ರಭಕ್ತಿ ಮೂಡಿಸುತಿದೆ.


          ಯಾವ ಟಿಪ್ಪು ಜಯಂತಿಯ ಕಾರಣಕ್ಕೆ ಕೊಡಗಿನಲ್ಲಿ ಮೊನ್ನೆ ಬಿ.ಜೆ.ಪಿ ಗೆ ಜನ ಮತ ಕೊಟ್ಟರೋ , ಅದರ ಪ್ರಭಾವ ಸುಳ್ಯದ ಮೇಲಾಗಿದೆ.  ಏಕೆಂದರೆ ಒಂದು ಕಾಲದಲ್ಲಿ ಟಿಪ್ಪು ಕೂಡ ಸುಳ್ಯದ ಮುಖಾಂತರ ದಂಡಯಾತ್ರೆ ಮಾಡಿದವನೆ . ತನ್ನ ನೆತ್ತಿ ಮೇಲಿರುವ ಕೊಡಗಿನಂತೆ ಎಲ್ಲ ಕಡೆ ಬಿ.ಜೆ.ಪಿ ಸದಸ್ಯರನ್ನು ಹೊಂದಿರುವ ಸುಳ್ಯ ಕಾಂಗ್ರೆಸ್ ಮುಕ್ತವಾಗುವತ್ತ ಹೊರಟಿದೆ. ಎಂದೋ ನಡೆಯುವ ಬಂದ್ ಗಳನ್ನೂ ಗಲಭೆಯೇನೋ ಎಂಬಂತೆ ಬಿಂಬಿಸುವವರ ಮದ್ಯೆ ,  ಬಿ.ಜೆ.ಪಿ ಕೊಮುವಾದಿಯಂತೆ , ಜಾತಿವಾದಿಯಂತೆ ಎನ್ನುವ ಅಂತೆ ಕಂತೆಗಳ ನಡುವೆ ಸುಳ್ಯ ನಿಶ್ಚಿಂತೆಯಾಗಿದೆ. ದೆಹಲಿಯ ಆಗು-ಹೋಗುಗಳಿಗೆ ಧ್ವನಿಯಾಗುತ್ತ



                                                                                                         -Tharanatha Sona