Showing posts with label poetry. Show all posts
Showing posts with label poetry. Show all posts

Friday, March 3, 2017

ಚಿತ್ರ ಕವನ

               Dear with Bear

 

 

 


ಈ ಚಳಿಗಾಲದ ಒಂದು ಸಂಜೆ

ಪಾರ್ಕಿನ ಗಿಡದ ಬುಡದಲ್ಲಿ

ಹುಡುಗಿಯೊಬ್ಬಳು ಕೂತಿದ್ದಳು.



ಹೂವು ಹಣ್ಣುಗಳಿರಲಿಲ್ಲ ಗಿಡದಲ್ಲಿ

Smile ಇರಲಿಲ್ಲ ಕರಡಿಯ ಮುಖದಲ್ಲಿ

ಹುಡುಗಿ ಮೌನವಾಗಿದ್ದಳು.



ಕತ್ತಲಾಯಿತು, ಮತ್ತೊಮ್ಮೆ ನೋಡಿ

ಅ ಹುಡುಗಿಯು ಕಾಣೆ

ಅ ಕರಡಿಯು ನಾನೆ!!!



                                     -Tharanatha sona

Monday, January 23, 2017

ಏನು ಏನು ನೀ ನನಗೆ?

 
 



ಯಾಕೆ ಬಂದೆ ನೀ ನನ್ನೊಳಗೆ
ಅಳಿಸಲಾಗದು ನಿನ್ನ ಹೆಜ್ಜೆ
ಮೂಡಿ ನನ್ನ ನೆನಪೊಳಗೆ
ಕೇಳಿಸದೇನು ನನ್ನ ಮಾತು
ಬಂಧಿ ನಾನು ನಿನ್ನೊಳಗೆ
ಏನು ಏನು ನೀ ನನಗೆ?
ಪರಿಚಿತೆಯಲ್ಲ ! ಸ್ನೇಹಿತೆಯಲ್ಲ!
ನಿನಗೆ ನನ್ನಲ್ಲಿ ಹೆಸರಿಲ್ಲ.
ನೀನು ಇರದ ನಾನೆನಲ್ಲ
ಇದರ ಹೊರತು ಇನ್ನೇನಿಲ್ಲ
ಹೇಳಿ ಬಿಡು ಓ ಮೌನವೇ! ಒಮ್ಮೆ
ಏನು ಏನು ನೀ ನನಗೆ?
ಓಡುವೆ ದೂರ ನಿನ್ನನು ಬಿಟ್ಟು
ನಟಿಸಿ ನಿನ್ನನೇ ಮರೆತಂತೆ
ನೋಡುವೆ ನಿನ್ನನೇ ಗಮನವಿಟ್ಟು
ದಿಟ್ಟಿಸಿ ಕಣ್ಣನೇ ಮರೆತಂತೆ
ಹೇಳಿ ಬಿಡು ಓ ಮೌನವೇ ಒಮ್ಮೆ
ಏನು ಏನು ನೀ ನನಗೆ?
ಓದುವೆ ನಿನ್ನ ಸಂದೇಶವನ್ನು
ಅರ್ಥವಾಗದ ಕಾವ್ಯದಂತೆ
ಓದಲಿ ಹೇಗೆ ನಿನ್ನ ಮನವನ್ನು
ಇದ್ದರೆ ಹಣೆಯ ಬರಹದಂತೆ
ಹೇಳಿ ಬಿಡು ಓ ಮೌನವೇ ಒಮ್ಮೆ
ಏನು ಏನು ನೀ ನನಗೆ?
ಕೂರುವೆ ನಾನು ನಿದ್ದೆಯ ಕೆಟ್ಟು
ಕಾಲವ ಕೂಡ ಮರೆತಂತೆ
ನಿನ್ನಲೇನಿದೆ? ಅಂಥಹ ಗುಟ್ಟು
ನನ್ನ ಮನವ ಸೆಳೆವಂತೆ
ಹೇಳಿ ಬಿಡು ಓ ಮೌನವೇ ಒಮ್ಮೆ
ಏನು ಏನು ನೀ ನನಗೆ?
-Tharanatha sona

Monday, December 5, 2016

ಪ್ರೀತಿ ಮಾಡೋನು

ಒಪ್ಪಿ ಮಾಡೋ ಪ್ರೀತಿನೇ ಉಳಿಯಲ್ಲ!
ಇನ್ನು ತಪ್ಪಿ ಅಗೋದು ಉಳಿತದಾ?
ಅಂಥಾ ಕೊಹ್ಲಿಗೆ ಅವ್ಳು ಸಿಕ್ಕಿಲ್ಲ
ಇನ್ನು ಈ ಪೇಸ್ ಗೆ ಸಿಗ್ತಾಳಾ?
ಹುಡ್ಗಿ ಸಿಕ್ಕಿಲ್ಲಾಂತ ಯಾಕೆ ಆಳ್ತೀರಾ
ಕಣ್ಣೀರು ಒರ್ಸೋದಕ್ಕೆ ಆವ್ಳೇನು ಬರ್ತಾಳ
ವಯಸ್ಸು ಮಾಡುವ ತಪ್ಪಿಗೆ
ಮನಸ್ಸಿಗೆ ಶಿಕ್ಷೆ ಏತಕೇ?
ಹಾಸಿಗೆ ಇಷ್ಟುದ್ದ ಕಾಲು ಅಷ್ಟುದ್ದ
ಕಲಿಯುವ ಪಾಠಗಳೇ ಬಾಳಿಗಾಸರೆ
ನಂದು ಮಿಸ್ಟೇಕೇ ಅಲ್ಲಾ  ವಯಸ್ಸಿನ ಮಿಸ್ಟೇಕು
ತಂದೆ ನಂಗೆ ಸುಮ್ ಸುಮ್ಮನೆ ಬೈತಾರೆ!
ಪ್ರೀತಿಸೋ ಮೊದಲು ಸ್ಟಡಿ ಮಾಡಿರಬೇಕು
ಕೆನ್ನೆಗೆ ಏಟು ಬೀಳಾದಂಗಿರಬೇಕು
ಹುಡುಗರು ಕಷ್ಟಗಳ ಏನೂ ಮಾಡೋದು?
ನೋಡಿ ಅದರ ಜೊತೆ, ಸಿಗದ ಅವಳೊಂದು
ಹೈ ಹೀಲ್ಸ್ ನ ಬ್ಯೂಟಿಗೆ
ಪಪ್ಪಿ  ಜೊತೆ ಲವ್ವು ಏತಕೇ?
ಕೈಯಲ್ಲಿ ಕಾಸು ಇಲ್ಲದೆ ಇದ್ದರೂ
ಪೇಸ್ನಲ್ಲಿ ಇರಲಿ ಮಂದಹಾಸ
ಲೋಕಕೆ ಲೋಕವೇ ನಿಮ್ಗೆ ಬೈದರೂ
ಕೇಳಲೇ ಬೇಡಿ "ನಾನು ಲೂಸಾ?"
ಕಷ್ಟ ನಾಲ್ಕು ದಿನ ಗೇಸ್ಟಾಗಿ ಬರ್ತಾದೆ
ಕಾಲು ಎಳೆಯುವುದಕ್ಕೆ ಊರೇ ಕಾಯ್ತಾದೆ
ಹುಡುಗಿ ಮೆಚ್ಚೋದಕ್ಕೆ ಆಗ್ತಾವೆ ಹೀರೋಗಳು
ಮದುವೆ ಆಗ್ಳಿಬಿಡಿ ನಡಿತ್ತಾವೆ ಯುದ್ಧಗಳು
ಇಲ್ಲಾ‌ ನನಗೆ ಕೋತಿಯಾನೆಗೂ
ಪ್ರೀತಿಯಾ ಮೇಲೆ ನಂಬಿಕೆ
/.../
/..../
/...../
/....../
/......./
ಸ್ಟ್ರೆಟ್ ನಡೆಯುವ ಮಕ್ಕಳೆ ಬೀಳ್ತಾವೆ
ಇನ್ನೂ ಉಲ್ಟಾ ನಡಿಯೋವು ನಿಲ್ತವಾ?
ನಿಂಗೆ ನಂಗೆ ಏನು ಸಂಬಂಧ
ನಿನ್ನ ಸುಮ್ನೆನೆ ಬಿಡ್ತಿನಾ
ಏನೋ‌ ಹೇಳೊದಕ್ಕೆ ಕವಿತೆ ಬರಿತೀಯಾ
ಕೇಸ್ ಕೊಟ್ಟೆ ಅಂದ್ರೆ ಮುದ್ದೆ ಮುರಿತೀಯಾ
ಧೈರ್ಯ ಇಲ್ಲದಿರೋ ನಿನ್ನ ಪೇಸ್ ಗೆ
ತಲೆ ಕಲೆ ಹುಡ್ಗಿ ಯಾತಕೇ?
\.....\
\........\
\.........\
-Tharanatha sona

Wednesday, May 4, 2016

ಮೋಡವಾಗಿದೆ ಮನದಲ್ಲಿ
ಭಾವನೆಯ ಹನಿ ತಾಕಿ
ಸುರಿಯುತಿಹುದು ಕಣ್ಣಹನಿ
ಮೆದುವಾಗಿ ಸೋನೆಯಂತೆ

ಗುಡುಗಿದೆ ಕಂಪಿಸಿದೆ ಹೃದಯ
ಭೂಕಂಪದಂತೆ ಲಘುವಾಗಿ
ಸೋಲುತ್ತಿರುವ ಕೈಕಾಲು ಹೇಳಿದೆ
ಇದೆಲ್ಲಾ ನಿನ್ನ ನೆನಪಿಗಾಗಿ

 ಬ್ರಹ್ಮನ ಹಣೆಯ ಬರಹದವಳೇ
ಬೆಳಗಿನ ಕನಸಿನಲ್ಲಿ ಕಾಡಿದವಳೇ
ಮರೆತೋದ ಸೂರ್ಯನಿಂದು ಭೂಮಿಗೆ ಬರಲು
ತಡವೇಕೆ ನಿನಗೆ ಮತ್ತೆ ಬಾಳಿಗೆ ಬರಲು?

                                    -Tharanatha Sona 

Sunday, May 24, 2015

ಮಳೆ ಮೋಡದ ಹುಡುಗಿ

ಮಳೆ ಮೋಡದ ಹುಡುಗಿ ಬಾನಿನಲ್ಲೆ ಅಡಗಿ
ಧರೆಗೆ ಜಾರದೇ 
ನಡುನಡುವೆ ಗಾಳಿಗೆ ಸಿಲುಕಿ 
ಎಲ್ಲೆಲ್ಲೊ ಸಾಗುತ ಹೊಗಿ 
ಕೊನೆಗೂ ಬೀಳದೆ 

ಮುಂಗಾರಿನ ಸಿಡಿಲು ನೀ 
ಹಿಂಗಾರಿನ ದಿಗಿಲು ನೀ 
ಗುಡುಗುಡುಗಿ ಬಡಿದೋಡೊ  ಸಿಡಿಲು ನೀ 
ಮುಂಜಾವಿನ ಹಿಮವು ನೀ
ಮುಸ್ಸಂಜೆಯ ತಂಗಾಳಿ ನೀ 
ಸುಡುಸುಡುವ ರವಿಯ ತಾಪವು  ನೀ 

ನಡೆದಾಡುವ ದೇವರು ನೀ 
ಸುಳಿದಾಡುವ ದೆವ್ವವು ನೀ 
ಕಾಣದಿರೋ ಬಿಂದುವು ನೀ 
ನಿಲುಕದಿರೋ ಸಿಂಧೂವು ನೀ 
ಪ್ರೀತಿ ತುಂಬಿ ಉಕ್ಕುತಿರೊ ಸಾಗರ ನೀ
                                                    

Saturday, March 21, 2015

ಕವನ

ಮನದ ಮಿಡಿತವ ತುಡಿತವ
ಅರಿಯದೆ ಹೋದ ನೀನ್ಯಾವಳೇ?
ಹೃದಯದ ಬಡಿತ ಮನಸ್ಸಿನ ನುಲಿತ
ತಿಳಿಯದೇ ಹೋದ ನನ್ನವಳೇ!
ಕಲರವ ಕಪ್ಪೆಗೂ ಮುಂಗಾರು ಮಳೆಗೂ
ಯಾವ ಜನ್ಮದ ಮೈತ್ರಿಯಿದೆ?
ನಿನ್ನ ಬರುವಿಗೆ ನನ್ನಲ್ಲಿರುವ
ಜಾತಕ ಹಕ್ಕಿಯೂ ಕಾಯುತ್ತಿದೆ
ಬೆಟ್ಟದ ನೆಲ್ಲಿಗೂ ಕಡಲಿನ ಉಪ್ಪಿಗೂ ಊಹಿಸಲಾರದ ಸ್ನೇಹವಿದೆ
ಬೆಟ್ಟದ ನದಿಯೂ ಕಡಲನು ಸೇರಿ
ಬಂಧವೊಂದನ್ನು ಸಾಧಿಸಿದೆ
ಮನಸ್ಸು ಮನಸ್ಸಿಗೂ ಸೇತುವೆ ಬೇಕು
ಭಾವನೆ ಅದನ್ನು ಸಾಧಿಸದೆ?
ಭಾವನೆ ಕಟ್ಟಿದ ಸೇತುವೆ ಮೇಲೆ
ನಡೆಯಲು ನಿನಗೆ ಮನಬಾರದೆ?
                                            

Sunday, January 4, 2015

my first poetry

ನನಗೊಂದು ಮೈನಾವಿದೆ
ಕಪ್ಪನೆ ಕಣ್ಣು ಇದೆ
ಮನದಲ್ಲಿ ಸಾವಿರ ಕನಸು ಇದೆ
ಬರುತ್ತಿಲ್ಲ ರಾತ್ರಿ ನಿದ್ದೆ
ಆವಳದೆ ನೆನಪಲಿದ್ದೆ
ಆವಳನೆ ನೆನೆಯುತಿರೊ ಹೃದಯವಿದೆ
ಕಪ್ಪನೆ ಕಣ್ಣಿಗೆ ಕಾಡಿಗೆ ಯಾತಕೆ
ಮಿಂಚಿನ ನೋಟಕೆ ಕರಗಿದೆ ಶಾಖಕೆ
ಮನ ಹಾಳಾಗಿದೆ ನಿನ್ನ ಧ್ಯಾನಕೆ
ಬಿಸಿಲಿನ ಬೇಗೆಗೆ ಕರಗಿರೊ ಮಂಜಿನ
ಹಾಗಗಿದೆ ನನ್ನ ಮನಸ್ಸಿಗೆ
ನಿನ್ನನೊಮ್ಮೆ ನೊಡಿ ನಾನು ಮರೆಯಲು ಆಗದು ನಾನು ಹಾಳಗಿಯೆ ನಿನ್ನ ಧಾಳಿಗೆ
ನಿನ್ನನೊಮ್ಮೆ ನೊಡಿ ನಾನು ಮರೆಯಲು ಆಗದು ಪ್ರೀತಿ ಆರಳೊಗಿದೆ ನನ್ನ ಬಾಳಲಿ
ನವಿಲಿನ ಅಂದಕೆ ಕೋಗಿಲೆ ಕಂಠವೂ
ಚಂದಿರ ವದನಕೆ ಹುಣ್ಣಿಮೆ ಕಾಂತಿಯು
ತುಂಬಿ ತುಳುಕುವ ಮೈಸಿರಿಯು
ಕೆಂಪಿನ ತುಟಿಗಳಿಗೆ ಗಿಣಿಯೆಲ್ಲಿ ಹೊಲಿಕೆ
ನಿನ್ನಯ ಕಾಲಿನ ಗೆಜ್ಜೆಯ ತಾಳಕೆ
ನನ್ನಿ ಹೃದಯವು ಬರುವುದೆ ಬಾಳಿಕೆ
ಕಾಯುವೆ ನಿನ್ನಿ ಉತ್ತರಕೆ