ಮಳೆ ಮೋಡದ ಹುಡುಗಿ ಬಾನಿನಲ್ಲೆ ಅಡಗಿ
ಧರೆಗೆ ಜಾರದೇ
ನಡುನಡುವೆ ಗಾಳಿಗೆ ಸಿಲುಕಿ
ಎಲ್ಲೆಲ್ಲೊ ಸಾಗುತ ಹೊಗಿ
ಕೊನೆಗೂ ಬೀಳದೆ
ಮುಂಗಾರಿನ ಸಿಡಿಲು ನೀ
ಹಿಂಗಾರಿನ ದಿಗಿಲು ನೀ
ಗುಡುಗುಡುಗಿ ಬಡಿದೋಡೊ ಸಿಡಿಲು ನೀ
ಮುಂಜಾವಿನ ಹಿಮವು ನೀ
ಮುಸ್ಸಂಜೆಯ ತಂಗಾಳಿ ನೀ
ಮುಸ್ಸಂಜೆಯ ತಂಗಾಳಿ ನೀ
ಸುಡುಸುಡುವ ರವಿಯ ತಾಪವು ನೀ
ನಡೆದಾಡುವ ದೇವರು ನೀ
ಸುಳಿದಾಡುವ ದೆವ್ವವು ನೀ
ಕಾಣದಿರೋ ಬಿಂದುವು ನೀ
ನಿಲುಕದಿರೋ ಸಿಂಧೂವು ನೀ
ಪ್ರೀತಿ ತುಂಬಿ ಉಕ್ಕುತಿರೊ ಸಾಗರ ನೀ