"ನೀವು ಹಾಕಾಂಗ್ ನಲ್ಲಿ ನೆಲ ಹೊಕ್ಕರೆ ದ-ಅಮೇರಿಕಾದಲ್ಲಿ ಹೊರಬರಬಹುದು!" |
ನಿಮಗೆಲ್ಲಾ ಚಿಕ್ಕಂದಿನಿಂದಲೂ ಒಂದು ಆಸೆ ಇರಬಹುದು, ಕೆಲವರಿಗೆ ಈಗ ಅರಿವಾಗಿರಬಹುದು. ನಮ್ಮ ಕಾಲ ಕೆಳಗಿನಿಂದ ಭೂಮಿಯನ್ನು ಕೊರೆಯುತ್ತ ಆಳಕ್ಕೆ ಹೋದರೆ, ಇನ್ನೊಂದು ಬದಿಯಲ್ಲಿ ಏನು? ಇರಬಹುದು ಎಂದು!. ಪ್ರಾಕ್ಟಿಕಲ್ ಅಗಿ ಇದು ಕಾರ್ಯಸಾಧ್ಯವಾಗಲಾರದು.ಸರಾಸರಿ 12,742 ಕಿ.ಮೀ ಇರುವ ಭೂಮಿಯ ಎರಡು ಮೇಲ್ಮೈ ಆಂತರವನ್ನು ಕೊರೆಯುವುದು, ಸದ್ಯ ಲಭ್ಯವಿರುವ ಯಾವ ಯಂತ್ರದಿಂದಲೂ ಸಾಧ್ಯವಿಲ್ಲ ಬಿಡಿ.
"ಕೋಲ ಸೂಪರ್-ಡೀಪ್ ಪ್ರೊಜೆಕ್ಟ್" ಎನ್ನುವ ಹೆಸರಿನಲ್ಲಿ, ಸೊವಿಯತ್ ರಷ್ಯಾ ಎಪ್ಪತ್ತರ ದಶಕದಲ್ಲಿ ಇಂತಹದೊಂದು ಯೋಜನೆಯನ್ನು ಕೈಗೆತ್ತಿಕೊಂಡಿತು. ರಷ್ಯಾದ 'ಕೋಲ ಪೆನಿಸುನ್ ' ಎನ್ನುವ ಸ್ಥಳದಲ್ಲಿ ಭೂಮಿ ಕೊರೆಯುವ ಯೋಜನೆ ಆರಂಭಗೊಂಡು, 1994 ರವರೆಗೆ, ಭರ್ತಿ 24 ವರ್ಷ ಎಡೆಬಿಡದೆ 23 ಸೆ.ಮೀ ಅಗಲವಾಗಿ ಕೊರೆದರೂ ಕೂಡ, ಕೊರೆದ ಆಳವೆಷ್ಟು ಗೊತ್ತೆ? 12,262 ಮೀ, ಅರ್ಥಾತ್ 12 ಕಿ.ಮೀ! ಕೊನೆಗೆ 180 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ಭೂಮಿ ಕೊರೆಯುವ ಉಪಕರಣಗಳೂ ಹಾಳಾಗಿ ಯೋಜನೆಯನ್ನು ಸ್ಥಗಿತಗೊಳಿಸ ಬೇಕಾಗಿ ಬಂತು. 2008 ರವರೆಗೆ ಇದೇ ಭೂಮಿಯ ಅತಿ ದೊಡ್ಡ ಮಾನವ ನಿರ್ಮಿತ ಬಾವಿಯಾಗಿತ್ತು. ನಂತರ ಕತಾರ್ ಹಾಗೂ ರಷ್ಯಾದ ತೈಲಬಾವಿಗಳು ಇದನ್ನು ಹಿಂದಿಕ್ಕಿದವು.
ಭೂಮಿಯ ಆಳಕ್ಕೆ ಹೋದಂತೆ ತಾಪ ಆಧಿಕವಾಗುವುದ್ದರಿಂದ ಇವುಗಳ ಕಾರ್ಯಸಾಧ್ಯತೆ ಸುಲಭವಲ್ಲ. ಇನ್ನು ನೀವು ಭೂಮಿಯ ಒಳಗಿನಿಂದ ಆಚೆ ಮೇಲ್ಮೈಯನ್ನು ತಲುಪಲು ಸಾಗುವಾಗ ಸಿಗುವ, ಭೂಮಿಯ ಕೇಂದ್ರ ಭಾಗದ ಉಷ್ಣಾಂಶ ಎಷ್ಟುಗೊತ್ತೆ? 7000 ಡಿಗ್ರಿ ಸೆಲ್ಸಿಯಸ್ ಅಷ್ಟೇ. 35-40 °C ಯ ಬಿಸಿಲಿಗೆ ಬೆವರುವ ನಾವುಗಳು ಅಷ್ಟೊಂದು ತಾಪಕ್ಕೆ ಉಳಿಯಲು ಉಂಟೇ? ಇಷ್ಟು ಆಳಕ್ಕೆ ತಲುಪುವ ಮೊದಲೇ ಉಕ್ಕಿಬರುವ ಲಾವಾರಸದಿಂದ ಪಾರಾಗುವುದು ಹೇಗೆ?
ಭೂಮಿಯ ಆಳಕ್ಕೆ ಹೋದಂತೆ ತಾಪ ಆಧಿಕವಾಗುವುದ್ದರಿಂದ ಇವುಗಳ ಕಾರ್ಯಸಾಧ್ಯತೆ ಸುಲಭವಲ್ಲ. ಇನ್ನು ನೀವು ಭೂಮಿಯ ಒಳಗಿನಿಂದ ಆಚೆ ಮೇಲ್ಮೈಯನ್ನು ತಲುಪಲು ಸಾಗುವಾಗ ಸಿಗುವ, ಭೂಮಿಯ ಕೇಂದ್ರ ಭಾಗದ ಉಷ್ಣಾಂಶ ಎಷ್ಟುಗೊತ್ತೆ? 7000 ಡಿಗ್ರಿ ಸೆಲ್ಸಿಯಸ್ ಅಷ್ಟೇ. 35-40 °C ಯ ಬಿಸಿಲಿಗೆ ಬೆವರುವ ನಾವುಗಳು ಅಷ್ಟೊಂದು ತಾಪಕ್ಕೆ ಉಳಿಯಲು ಉಂಟೇ? ಇಷ್ಟು ಆಳಕ್ಕೆ ತಲುಪುವ ಮೊದಲೇ ಉಕ್ಕಿಬರುವ ಲಾವಾರಸದಿಂದ ಪಾರಾಗುವುದು ಹೇಗೆ?
ಇನ್ನೂ ನಮ್ಮ ಕಾಲ ಕೆಳಗೆ, ಅಂದರೆ ಭೂಮಿಯ ಇನ್ನೊಂದು ಬದಿಯಲ್ಲಿ ಏನಿದೆ ಎಂದು ತಿಳಿಸಿಕೊಡುವ ನಕ್ಷೆಗೆ "ಆ್ಯಂಟಿಪೊಡೆಸ್ ಮ್ಯಾಪ್" ಎಂದು ಹೆಸರು. ಇದರ ಮೂಲನಾಮ 'ಆ್ಯಂಟಿಪೋಡ್' ಗ್ರೀಕ್ ನ antípous ಎನ್ನುವ ಶಬ್ದದಿಂದ ಬಂದಿದೆ. ಗೋಳಕಾರವಾಗಿರುವ ಭೂಮಿಯಲ್ಲಿ ನೀವು ನಿಂತಿರುವ ಬಿಂದುವಿನಿಂದ, ಭೂಕೇಂದ್ರೀಯ ಭಾಗಕ್ಕೆ ಎಳೆದ ರೇಖೆಯ ಮುಂದೆ ಕಾಣಸಿಗುವ ಬಿಂದು/ಪ್ರದೇಶವೇ ನಿಮ್ಮ ಆ್ಯಂಟಿಪೋಡ್. ಒಂದು ಪ್ರದೇಶ ಹಾಗೂ ಅದರ ಆ್ಯಂಟಿಪೋಡ್ ಪ್ರದೇಶದ ನಡುವೆ ಸಾಮಾನ್ಯವಾಗಿ 12 ಗಂಟೆಗಳ ವ್ಯತ್ಯಾಸ ಇರುತ್ತದೆ (ಓರೆಕೋರೆಯಾಗಿ ಎಳೆದ 0+ Standard Time ರೇಖೆಯ ಕೆಲವು ಪ್ರದೇಶವನ್ನು ಹೊರತುಪಡಿಸಿ).
ಸಮಭಾಜಕ ವೃತ್ತದಿಂದ ಉತ್ತರ ಭಾಗದಲ್ಲಿರುವ ಭಾರತದ ಆ್ಯಂಟಿಪೋಡ್, ದಕ್ಷಿಣ ಆಮೇರಿಕಾ ಖಂಡವನ್ನು ಆವರಿಸಿರುವ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿದೆ. ಈ ಪ್ರದೇಶ ದಕ್ಷಿಣ ಧ್ರುವದಲ್ಲಿರಲು ಕಾರಣ, ಭೂಮಿಯ ಆಕ್ಷಾಂಶ 23.5ಡಿಗ್ರಿಗಳಷ್ಟು ವಾಲಿರುವುದು. ಇದರಿಂದಾಗಿ ಭೂಮಧ್ಯ ರೇಖೆಯ ಉತ್ತರದ ಪ್ರದೇಶಗಳ antipode ದಕ್ಷಿಣ ಭಾಗದಲ್ಲಿರುತ್ತದೆ, ಹಾಗು ದಕ್ಷಿಣದ ಪ್ರದೇಶಗಳ ಆ್ಯಂಟಿಪೋಡ್ ಉತ್ತರಭಾಗದಲ್ಲಿದೆ. ಪೆರು ದೇಶದ ತೀರದಿಂದ ಅಂದಾಜು 2000 ಕಿ.ಮೀ ದೂರದಲ್ಲಿ ಭಾರತದ ಆ್ಯಂಟಿಪೋಡ್ ಇದೆ. ಭಾರತೀಯರ ಕಾಲಕೆಳಗೆ ಏನಿದೆ ಎನ್ನುವ ಪ್ರಶ್ನೆಗೆ ಉತ್ತರ- ದಕ್ಷಿಣ ಪೆಸಿಫಿಕ್ ಮಹಾಸಾಗರ.
ಕೆಂಪು ಭಾಗದ ಆಂಟಿಪೋಡ್ಸ್ ಹಳದಿ ಭಾಗದಲ್ಲಿದೆ |
ಅಂದ ಹಾಗೆ, ನಿಮ್ಮ ವಿರುದ್ಧ ಮೇಲ್ಮೈನಲ್ಲಿ ಭೂಮಿಯಲ್ಲಿ ಯಾವ ಪ್ರದೇಶವಿದೆ ಎಂದೂ ತಿಳಿಯಲು "http://antipodr.com" ಎನ್ನುವ ಜಾಲತಾಣವಿದೆ.
-Tharanatha Sona